Pages

Subscribe:

Monday, March 5, 2012

ಬಣ ಬಣಿಸೋ ನನ್ನೀ ಮನ


ಅದೇನೋ ಸದ್ದು ಮತ್ತೆ ಮತ್ತೆ ಸುತ್ತಿ ಸುತ್ತಿ ಕಿವಿಗಳಿಗೆ ಅಪ್ಪಳಿಸುತಿದೆ,
ಮನದ ಆಗಸದ ತುಂಬ ದುಗುಡದ ಕಾರ್ಮೋಡಗಳು ಹಬ್ಬುತಿದೆ,
ಕಂಗಳು ಮತ್ತು ಮನ ತಾ ಮುಂದು ನಾ ಮುಂದು ಎಂದು ಚಂಚಲಿಸುತ್ತಿದೆ,
ಸುತ್ತ ಮುತ್ತಲಿನ ಆ ಜನ ಸುಮ್ಮನಿದ್ದರು ಏನೋ ಕೊಂಕಾಡಿದಂತೆ ಭಾಸವಾಗುತ್ತಿದೆ,
ಎಲ್ಲವನು ಉಲಿದು ದೂರ ಸಾಗೊಣವೆಂಬ ಆಸೆಯು ಉಸಿರು ಬುಸುಗುಟ್ಟುತಿದೆ,
ಕಂಗಳು ಕೂಡ ದೋ ಎಂದು ಸುರಿಯುವ ಮುನ್ನ ನಿನ್ನ ಚಿತ್ರಪಟ ಅಸ್ಪಷ್ಟ ಗೋಚರವಾಗುತಿದೆ,
ಕಂಡು ಮೌನ ವ್ರತ ತಾಳಿ ದೂರ ಸಾಗುತಿಹ ನಿನ್ನ ದಾರಿಯ ಕಂಡು ಉಸಿರು ಕೂಡ ನನ್ನ ಅಸ್ಪ್ರುಷ್ಯನಂತೆ ಮಾಡುತಿದೆ.
- ವರುಣ್ ಕಂಜರ್ಪಣೆ.

2 comments:

ಸುಷ್ಮಾ ಮೂಡುಬಿದಿರೆ said...

ಒಂಟಿಯಾಗಿ ಮನಸ್ಸಿನ ಮಾತನ್ನು ಕೇಳುವಾಗ ಅನುಭವಾಗುವ ಭಾವವಿದು...
ಮನಸ್ಸಿಗೆ ಹತ್ತಿರವಾಗುವ ವರ್ಣನೆ..
ನೈಸ್....

DealFinder said...

Nice one...

Post a Comment