Pages

Subscribe:

Wednesday, November 28, 2012

ಹುಡುಕಾಟ


ಬಚ್ಚಿಟ್ಟ ಭಾವನೆಗಳ ಭವಣೆ ಇನ್ನೆಷ್ಟು ದಿನ ಎನ್ನ ಕಿತ್ತು ತಿನ್ನುವುದೋ ?
ಖಾಲಿಯಾಗೇ ಖಯಲಿಯಾಗಿದ್ದ ಮನಕೆ ಮಾರುಹೋಗಿ ಬಂದವರು ಮರೆಯಾದರೇಕೆ ?
ಸುತ್ತಲಿನ ಜಗದಿ ಸುತ್ತುವ ಎನಗೆ ಸುತ್ತಿ ಸುತ್ತಿ ಬರುವ ನೆನಪಿನ ನಂಟು ಎಷ್ಟೋ ?
ಮಾತಲ್ಲೇ ಮತ್ತೆರಿಸೋ ಜೀವ ತಾನೇ ಮರುಕಿದರೆ ಅದ ಮುದ್ದು ಮಾಡುವವರು ಯಾರೋ ?
ಕಲ್ಪನೆಯ ಕಾನನದಿ ಕಣ್ಣಾಡಿಸಿದ ಮೇಲೆ ಕಂಡ ನಿಜಗಳ ತಾ ಜೀರ್ಣಿಸಿಕೊಳ್ಳುವುದೆನ್ತ್ಹೋ ?
ಇದೆಲ್ಲ ಪ್ರಶ್ನೆಗಳ ಪಾಳಿಗೆ ಬಿದ್ದವನ ಪಾಡು ನೋಡಿ ಒತ್ತಾಸೆ ಕೊಡುವ ಪುಟ್ಟ ಮನಸ್ಯಾವುದೋ ??

Saturday, August 18, 2012

ಅದು ಪುಟ್ಟ ಹಕ್ಕಿ

Varun Kanjarpane
ಅದು ಪುಟ್ಟ ಹಕ್ಕಿ !!
ಮುಗಿಲ ಮಂಟಪಕೆ ನೋಡ ನೋಡುತ್ತಾ ಕಪ್ಪು ಛಾಯೆ ಬಂದು ಅಂಟಿಕೊಂಡು ಸುಳಿದಾಡುತ್ತಿದೆ,

ಭಾನ್ದಲದ ಅಂಚಲಿ ಗುಡುಗು ಸಿಡಿಲು ಹಟಕ್ಕೆ ಬಿದ್ದವರಂತೆ ಮತ್ತೆ ಮತ್ತೆ ಮಾರ್ದನಿಸುತ್ತಿದೆ,
ಅದೆಲ್ಲೋ ಚಳ್ಹ್ ಎಂದು ಕಂಗೊಳಿಸಿ ಮರೆಯಾಗೋ ಕೋಲ್ಮಿಂಚುಗಳ ಜುಗಲಬಂದಿಯಾಗುತಿದೆ,
ಮರಗಿಡಗಲೋ ಸಾಲು ಸಾಲಾಗಿ ಗಾಳಿಯ ಜತೆ ಸೇರಿ ಮತ್ತೆರಿದಂತೆ ಬಳುಕಾಡಿ ನರ್ತಿಸುತ್ತಿದೆ,
ಮನುಜನೋ ಎಲ್ಲದಿಕ್ಕು ನಾ ಸೈ ಎಂಬಂತೆ ಬೆಚ್ಚನೆ ಮನೆ ಸೇರಿಕೊಂಡಂತೆ ಭಾಸವಾಗುತಿದೆ,
ಬಹು ಕಾಲದಿಂದ ತ್ರುಷೆಯಾಗಿ ಬಳಲಿದ ಭುವಿ ಆಸೆಯಿಂದ ವರುಣನ ಬಾ ಬಾ ಎಂದಂತಿದೆ ,

ಆದರೆ ಅದು ಪುಟ್ಟ ಹಕ್ಕಿ,
ಗೂಡು ಮರಿ ತೊಯ್ದು ಮರುಕುವವು ಎಂದು ದೂರದ ಕಂಬದ ಮೇಲೆ ಕುಳಿತು,
ಮಳೆರಾಯ ಸ್ವಲ್ಪದಿನ ಬರದಿರು ಎಂದು ಒಂದೇ ಸಮನೆ ಅಂಗಲಾಚುತಿದೆ.


                                                                                     - ವರುಣ್ ಕಂಜರ್ಪಣೆ.

Monday, June 11, 2012

ಚೆಲುವೆ ಯಾಕೆ ಬಂದೆ ನನ್ನ ಕಣ್ಣ ಮುಂದೆ


ಚೆಲುವೆ ಯಾಕೆ ಬಂದೆ ನನ್ನ ಕಣ್ಣ ಮುಂದೆ...???
ಚೆಲುವೆ ಯಾಕೆ ಬಂದೆ ನನ್ನ ಕಣ್ಣ ಮುಂದೆ....

ನಾಲ್ಕಾರು ದಿನಗಳ ಕೆಳಗೆ ನಿನ್ನ ಚಿತ್ರಪಟ ಕಂಡು,
ಅದೇಕೋ ಏನೋ ಮುಗುಳ್ನಕ್ಕಿತು ನನ್ನ ಮನದ ಹಕ್ಕಿ.
ಬಾಯ್ತುಂಬ ಮಾತನಾಡಿ ಮುದಗೊಂಡಿತು ನನ್ನೀ ಎದೆಗೂಡು.

ಕಂಡಿರಲಿಲ್ಲ ನಿನ್ನ ಜತೆ ಓಡಾಡಿರಲಿಲ್ಲ ಒಂದೇ ಒಂದು ದಿನ,
ಮತ್ತೆ ಮತ್ತೆ ನಿನ್ನ ಮೊದಲ ಬಾರಿ ನೋಡೋ ಹಂಬಲ ಮೂಡುತ್ತಿತ್ತು.

ಎಂದು ಕಾಣದ ನಿನ್ನ ನೋಡೋ ದಿನ ಹತ್ತಿರ ಬರುತಿತ್ತು, ಬಂದೆ ಬಂತು,
ನೂರಾರು ಮೈಲಿ ದೂರದ ನೀನು ಕಣ್ಣಮುಂದೆ, ರೋಮಾಂಚನ ಆ ಭಾವ.
ಪುಟ್ಟನೆಯ ಎದೆ ಗೂಡಲಿ ಬೆಚ್ಚನೆ ಭಾವಗಳು ಜೆಂಕರಿಸುವಂತೆ ನಿನ್ನ ಆ ಮುಗ್ದ ನಗುಮೊಗ,
ಎನ್ನೆದೆಯ ಭಾವ ಲಹರಿಗೆ ಇಂಬು ಕೊಟ್ಟಿತ್ತು.
ಜತೆಯಾಗಿ ಹಿತ ನುಡಿದು ಸಾಗೋ ಸಲಿಗೆ, ಗಾಳಿ ಬೀಸಿ ಬರಲು ನಿನ್ನ  ಮುಂಗುರುಳ  ಸ್ಪರ್ಶ,
ಎನ್ನಲಿ ಹರ್ಷದ ಕೋಡಿ ಹರಿಸಿತ್ತು,

ಇವೆಲ್ಲವುಗಳ ನಡುವೆ ಇದು ಕ್ಷಣ ಕಾಲದ ಸಂತಸ - ಆಸೆಯ ಬಿಸಿಲು ಕುದುರೆ ಅನ್ನೋ ಪ್ರಜ್ಞೆ ಕಾಡುತಿತ್ತು,
ಮತ್ತದೇ ಉತ್ತರವಿಲ್ಲದ ಪ್ರಶ್ನೆ, ಚೆಲುವೆ ಯಾಕೆ ಬಂದೆ ನನ್ನ ಕಣ್ಣ ಮುಂದೆ ??

- ವರುಣ್ ಕಂಜರ್ಪಣೆ.


Monday, March 5, 2012

ಬಣ ಬಣಿಸೋ ನನ್ನೀ ಮನ


ಅದೇನೋ ಸದ್ದು ಮತ್ತೆ ಮತ್ತೆ ಸುತ್ತಿ ಸುತ್ತಿ ಕಿವಿಗಳಿಗೆ ಅಪ್ಪಳಿಸುತಿದೆ,
ಮನದ ಆಗಸದ ತುಂಬ ದುಗುಡದ ಕಾರ್ಮೋಡಗಳು ಹಬ್ಬುತಿದೆ,
ಕಂಗಳು ಮತ್ತು ಮನ ತಾ ಮುಂದು ನಾ ಮುಂದು ಎಂದು ಚಂಚಲಿಸುತ್ತಿದೆ,
ಸುತ್ತ ಮುತ್ತಲಿನ ಆ ಜನ ಸುಮ್ಮನಿದ್ದರು ಏನೋ ಕೊಂಕಾಡಿದಂತೆ ಭಾಸವಾಗುತ್ತಿದೆ,
ಎಲ್ಲವನು ಉಲಿದು ದೂರ ಸಾಗೊಣವೆಂಬ ಆಸೆಯು ಉಸಿರು ಬುಸುಗುಟ್ಟುತಿದೆ,
ಕಂಗಳು ಕೂಡ ದೋ ಎಂದು ಸುರಿಯುವ ಮುನ್ನ ನಿನ್ನ ಚಿತ್ರಪಟ ಅಸ್ಪಷ್ಟ ಗೋಚರವಾಗುತಿದೆ,
ಕಂಡು ಮೌನ ವ್ರತ ತಾಳಿ ದೂರ ಸಾಗುತಿಹ ನಿನ್ನ ದಾರಿಯ ಕಂಡು ಉಸಿರು ಕೂಡ ನನ್ನ ಅಸ್ಪ್ರುಷ್ಯನಂತೆ ಮಾಡುತಿದೆ.
- ವರುಣ್ ಕಂಜರ್ಪಣೆ.

Monday, February 27, 2012

ಯಾಕೆ ಹೀಗೆ ??


ಬಾಳ ಸಲಿಗೆಯಲಿ ಪ್ರೀತಿಯಿದೆ,
ಅವಳ ನೆನಪಲಿ ಅದೇನೋ ಹಿತವಿದೆ,
ಪ್ರತಿ ಉಸಿರಲು ಅವಳ ಹೆಸರಿದೆ,
ಪ್ರೀತಿಯ ಎಲ್ಲ ಪದಗಳು ಅವಳಿಗೆ ಸಂದಿವೆ,
ನಾಕಾಣೆ ಯಾಕೆ ಈಗೀಗ ಅವಳ ಮನಸು,
ದೂರ ಬಹುದೂರ ಸಾಗಿ ಹಿಂತಿರುಗಿ ನಗುತಿದೆ.

-ವರುಣ್ ಕಂಜರ್ಪಣೆ.

Friday, February 24, 2012

ಪ್ರೀತಿಯ ರಸೀತಿ

ಮೌನವೆಂಬ ಸಾಗರದ ಅಂಚಲಿ ನಿಂತಿಹ ಎನಗೆ,
ಒಲವಿನ ಚಂದಿರ ಮೂಡಿದಾಗ ಅಂತರಂಗ ಉಲಿಯಿತು,
ಕಣ್ಣಲಿ ಆ ಚೆಲುವಿನ ಚಿತ್ರಪಟ ನಲಿದಾಡಿತು,
ಮತ್ತೆ ಮುಳುಗುವನೆಂಬ ಕಹಿ ಸತ್ಯ ಸುಳಿದಾಡಿತು,
ರೆಪ್ಪೆ ಕಪ್ಪೆ ಚಿಪ್ಪುಗಳಂತೆ ಒಂದನ್ನೊಂದು ಅಪ್ಪಿಕೊಂಡಿತು,
ಮನದ ಭಾವದ ರಸೀತಿಯಂತೆ ನಾಲ್ಕು ಹನಿಗಳು ನಯನಗಳ ತೋಯ್ದನ್ಥಾಯ್ತು.
-ವರುಣ್ ಕಂಜರ್ಪಣೆ.

ಅವಳ ನೆನಪು

ಜೀವ ಸೆಲೆಯಾಗಿ ನೆಲೆಯಿತ್ತ ಮನಸೀಗ,
ಕತ್ತಲಿನ ಬದುಕಲ್ಲಿ ಬಂಧಿಯಾಗಿಸಿ ದೂರ ಬಹು ದೂರ ಸಾಗಿದೆ.

ಜತೆ ನಡೆದು ಮತ್ತೆ ಸೇರುವ ಕನಸು ಸುಪ್ತವಾಗಿರಲು,
ಕೈ ಕಾಲು ದಣಿದು ಸೋತು ಇಳೆಯನು ಮುತ್ತಿಕ್ಕುತಿದೆ.

ಇಂದು ನಾಳೆಗಳ ನಡುವೆ ನಿನ್ನೆಯ ಸುಂದರ ಸೊಬಗು,
ಮಸನದಾಚೆಯ ಸಿಹಿಯಾದ ಅಳಿಸಲಾಗದ ಕಾಡುವ ನೆನಪುಗಳ ಕಲೆಯಾಗಿದೆ.

-ವರುಣ್ ಕಂಜರ್ಪಣೆ.